Saturday, January 3, 2009

ಎಲ್ಲಾ ಪ್ರೀತಿಗಾಗಿ....a life time LOVE ...

ಪ್ರೀತಿಯಿಲ್ಲದೆ ಬದುಕೇ ಇಲ್ಲ. ಪ್ರೀತಿಯಿಲ್ಲದ ತನ್ನ ಬದುಕು, ಬದುಕೇ ಅಲ್ಲ.

ಪ್ರೀತಿಯಿಲ್ಲದೆ ತಾನಿರುವುದು ಸಾಧ್ಯವೇ ಇಲ್ಲ. ಪ್ರೀತಿಯಿಲ್ಲದ ತಾನು, ತಾನೆ ಅಲ್ಲ.

ಪ್ರೀತಿಯೇ ತನ್ನ ಉಸಿರು. ಪ್ರೀತಿಯೇ ತನ್ನ ಜಗತ್ತು. ತಾನು ಪ್ರೀತೀನ ಗೆಲ್ತೀನಿ ಎಂದು ನಂಬಿ ಬದುಕಿದವನೇ ರವಿ.

ಆತನ ಜೀವನ, ಉಸಿರು, ರಾತ್ರಿ, ಹಗಲು, ನಿದ್ದೆ, ಕನಸು, ಮನಸು ಎಲ್ಲಾ, ಎಲ್ಲಾ


ಪ್ರೀತಿಗಾಗಿ .

-----------------------------------------------



ಪ್ರಾರಂಭ:



ಆಗತಾನೆ ಮುಂಗಾರಿನ ಮೊದಲ ಮಳೆಯ ಮೊದಲ ಹನಿ ಭೂಮಿಯನ್ನು ಸ್ಪರ್ಶಿಸಿತ್ತು.


ಮಧ್ಯಾಹ್ನದ ಮೂರು ಜಾವ ಕಳೆದು ಹೋಗಿತ್ತು. ಸೂರ್ಯನ ಉರಿ ಪ್ರತಾಪಕ್ಕೆ

ಬಿಸಿಯಾಗಿದ್ದ ಭೂಮಿಗೆ ತಾಗಿದ ಮಳೆಯಿಂದ ಒಂದು ಮಧುರ ಸುವಾಸನೆ

ಪರಿಸರದಲ್ಲಿ ಹರದತೊದಗಿತ್ತು. ಅ ಘಮ ಹರಡುತ್ತಿರುವ ಸಮಯದಲ್ಲಿ, ಬಿಸಿ

ಭೂಮಿಯನ್ನು ಜಲಧಾರೆ ತಂಪಾಗಿಸುತ್ತಿದ್ದ ಘಳಿಗೆಯಲ್ಲಿ ರವಿಯ ಹ್ರದಯದಲ್ಲಿ

ಪ್ರೀತಿಯ ಪ್ರಥಮ ಸ್ಪರ್ಷವಾಗಿತ್ತು. ಮಳೆಯಿಂದ ಒದ್ದೆಯಾಗುವುದನ್ನು

ತಪ್ಪಿಸಿಕೊಳ್ಳಲು ರವಿ ತಾನು ಹಾದುಬರುತ್ತಿರುವ ರಸ್ತೆಯ ತಿರುವಿನಲ್ಲೇ ಇದ್ದ ದೊಡ್ಡ

ಮರದ ನೆರಳನ್ನು ಆಶ್ರಯಿಸಿದ. ಸರಿಯಾಗಿ ಅದೇ ಸಮಯದಲ್ಲಿ ರಸ್ತೆಯ ಇನ್ನೊಂದು

ಬದಿಯಿಂದ ಬರುತ್ತಿದ್ದಳು ...... ಅವಳು. ರವಿಯ ಬದುಕನ್ನೇ ಬದಲಾಯಿಸಿದ ಹುಡುಗಿ.

ಮಳೆಯಲ್ಲಿ ನೆನೆಯುತ್ತ ಬರುತ್ತಿದ್ದಳು..... ಅವಳು. ರವಿಯ ಹೃದಯದಲ್ಲಿ ಪ್ರವೇಶಿಸಿದ

ಪ್ರಥಮ ಮತ್ತು ಅಂತಿಮ ಹುಡುಗಿ. ತೊಯ್ದು ತೊಟ್ಟಿಕ್ಕುತ್ತಿದ್ದ ಕೂದಲನ್ನು ಹಿಂದೆ

ಸರಿಸಿಕೊಳ್ಳುತ್ತ ಬರುತ್ತಿದ್ದಳು........ ಅವಳು. ರವಿಯ ಪ್ರೀತಿ, ಪ್ರೀತಿಯ ಹುಡುಗಿ. ಛಟ-

ಛಟವೆಂದು ಆಗಸದಲ್ಲಿ ಕೋಲ್ಮಿಂಚೊಂದು ಹರಿದಿತ್ತು. ರವಿಯ ಕಣ್ಣಿನಿಂದ ಹರಿದ

ಇನ್ನೊಂದು ಮಿಂಚು ನೇರ ಅವನ ಹೃದಯವನ್ನೇ ಸೇರಿತ್ತು.

"ಕಣ್ಣೆಂಬ ಬಾಗಿಲಿನಿಂದ ನಮ್ಮ ಅರಿವಿಗೇಬರದೆ ನಮ್ಮ ಹೃದಯವೆಂಬ


ಮನೆಯಲ್ಲಿ ಬಂದು ಶಾಶ್ವತವಾಗಿ ನೆಲೆಸಿಬಿಡುವ ಸುಮಧುರ ಅಪರಿಚಿತ

ಅತಿಥಿಯೆಂದರೆ ಪ್ರೀತಿಯೇ ಅಲ್ಲವೇ?" ಹಾಗಂತ ಮುಂದೊಂದು ದಿನ ರವಿಗೆ

ಅನ್ನಿಸಿದ್ದಿದೆ. ಆದರೆ ಘಳಿಗೆಯಲ್ಲಿ, ಅವಳನ್ನು ಕಂಡ ಈ ಕ್ಷಣದಲ್ಲಿ ಅವನಿಗೆ

ಮೊದಲು ಅನಿಭಾವಕ್ಕೆ ಬಂದಿದ್ದು ರೋಮಾಂಚನ, ಪ್ರೀತಿಯ ರೋಮಾಂಚನ, ನಂತರ

ಬಂದಿದ್ದು ಆಶ್ಚರ್ಯ. ಈ ಸಣ್ಣ ಪೇಟೆಯಲ್ಲಿ, ಪೆತೆಯೆಂದರೆ ತಪ್ಪಾದಿತೇನೋ,

ಒಂದಿಪ್ಪತ್ತೈದು ಮನೆಗಳಿದ್ದ, ಎಲ್ಲಾ ವ್ಯವಸ್ಥೆಗಳಿರುವ ಹಳ್ಳಿಯಲ್ಲಿ, ತನಗಿಲ್ಲಿ ಎಲ್ಲರ

ಪರಿಚಾಯವೂ ಇರುವಾಗ, ತಾನು ನೋಡಿರದ ಈ ಹಾಲುಗೆನ್ನೆಯ, ಅಮಾಯಕ

ನಗುವಿನ ಹುಡುಗಿ ಯಾರು ಎಂಬ ಆಶ್ಚರ್ಯ. ಇವಿಷ್ಟು ರವಿಯ ಅಂತರಂಗದಲ್ಲಿ ನಡೆದು

ಹೋಗುತ್ತಿರುವಂತೆಯೇ, ಇತ್ತ ರವಿಯ ನಿದ್ದೆಗದಿಯಲಿರುವ ಹುಡುಗಿ, ಆತನ ಪ್ರೀತಿ

ಆತನನ್ನು ದಾಟಿಕೊಂಡು ನಡೆದು ಹೋದದ್ದು ಏಕಕಾಲದಲ್ಲಿ ಜರುಗಿತ್ತು. ಆಕೆ ಸುಮ್ಮನೆ

ನಡೆದು ಹೋಗಿದಿದ್ದರೆ ರವಿಯ ಜೀವನ ಏನಾಗುತ್ತಿತ್ತೋ ಗೊತ್ತಿಲ್ಲ. ರವಿ ಆಕೆಯನ್ನು

ಪ್ರೀತಿಸುತ್ತಿದ್ದನೋ ಇಲ್ಲವೊ ಗೊತ್ತಿಲ್ಲ. ಆದರೆ ಆಕೆ ಅವನನ್ನು ದಾಟಿ ನಾಲ್ಕು ಹೆಜ್ಜೆ

ಹಾಕಿದವಳು ಎಡಕ್ಕೆ ಹಿಂದಕ್ಕೆ ಸ್ವಲ್ಪವೇ ತಿರುಗಿ ರವಿಯನ್ನು ನೋಡಿದಳಲ್ಲಾ, ನಾಲ್ಕು

ಕಣ್ಣುಗಳು ಅರೆ ಕ್ಷಣವಾದರೂ ಎಕಿಭಾವಿಸಿದ್ದವಲ್ಲ ಅಷ್ಟು ಸಾಕಿತ್ತು ರವಿಯನ್ನು ಪ್ರೀತಿಯ

ತೆಕ್ಕೆಗೆ ಎಳೆದುಕೊಳ್ಳಲು. ಆ ಕನ್ನೆ ಅಂಥವು, ಅವಳ ಅಷ್ಟೂ ಅಂದದ್ದೇ ಒಂದು

ವಜ್ಜೆಯಾದರೆ ಆ ಎರಡು ಕನ್ನುಗಳದ್ದೆ ಮತ್ತೊಂದು ವಜ್ಜೆ. ಎಲ್ಲೋ ಲಕ್ಷಕ್ಕೆ ಒಬ್ಬರಿಗೆ

ಇರುತ್ತವೆ ಅಂಥ ಮಾತನಾಡುವ ಕಣ್ಣುಗಳು...............................

to be continued.................